ಪ್ರಸಾದ್, ಇಂದು
(2017)
ಪುಟಾಣಿ ಮಕ್ಕಳ ಶಿಕ್ಷಣದ ಮಹತ್ವ.
Learning Curve (4).
pp. 2-8.
ISSN 2582-1644
Abstract
ಪ್ರಸ್ತುತ ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಪುಟಾಣಿ ಮಕ್ಕಳ
ಶಿಕ್ಷಣವೊಂದೇ ನಿಯಮಗಳ ಕಟ್ಟುಪಾಡುಗಳಿಲ್ಲದ
ಅನಿಯಂತ್ರಿತ ವಲಯವಾಗಿದೆ. ಶಾಲಾ ಶಿಕ್ಷಣಕ್ಕೆ ಹಲವಾರು
ನಿಯಮಗಳು, ನೀತಿ ರಚನೆಗಳು ಮತ್ತು ಅನೇಕ
ಕಾರ್ಯಚೌಕಟ್ಟುಗಳು ಹೀಗೆ ಬಹಳಷ್ಟು ನಿಯಮಗಳಿವೆ.ಈಗ
ಸಾರ್ವತ್ರಿಕ ಶಾಲಾ ಶಿಕ್ಷಣಕ್ಕೂ ನಿಯಮ ಬಂದಿದೆ. ಗ್ರಾಮೀಣ
ಪ್ರದೇಶದಲ್ಲಿ ಸರ್ಕಾರದ ಕಾರ್ಯಕ್ರಮವಾದ ಅಂಗನವಾಡಿ
ಎಂಬ ಶಿಶುವಿಹಾರ ವ್ಯವಸ್ಥೆ ಇದೆ. ಆದರೆ ಖಾಸಗೀ ಪುಟ್ಟ
ಮಕ್ಕಳ ಶಾಲೆಗಳಿಗೆ ಯಾವುದೇ ನಿಯಮಗಳಾಗಲೀ
ನಿರ್ಬಂಧವಾಗಲಿ ಇಲ್ಲ. ಹೀಗಾಗಿ ನಾನು ಇಂದು ನನ್ನ
ಮನೆಯಲ್ಲಿ ಒಂದು ಶಿಶುವಿಹಾರವನ್ನು ಪ್ರಾರಂಭಿಸುತ್ತೇನೆ
ಎಂದು ಹೊರಟರೆ ನನ್ನನ್ನು ಪ್ರಶ್ನಿಸುವವರು ಯಾರೂ
ಇಲ್ಲ. ನಿಮ್ಮ ಪಠ್ಯಕ್ರಮ ಏನು, ಯಾವ ಶಿಕ್ಷಣ ಮಂಡಳಿಯ
ನಿಯಮವನ್ನು ಅನುಸರಿಸುತ್ತಿದ್ದೀರಿ, ಯಾವ ವಯಸ್ಸಿನ
ಮಕ್ಕಳನ್ನು ದಾಖಲಿಸಿಕೊಳ್ಳುತ್ತೀರಿ? ಹದಿನೆಂಟು ತಿಂಗಳ
ಮಕ್ಕಳನ್ನು ತೆಗೆದುಕೊಳ್ಳುವುದು ನ್ಯಾಯಸಮ್ಮತವೇ? ಅಥವಾ
ದಾಖಲಾತಿಗೆ 3 ವರ್ಷ ತುಂಬಿರಲೇಬೇಕೆ? ಕನಿಷ್ಠ ಸುರಕ್ಷಾ
ನಿಯಮಗಳನ್ನು ಪಾಲಿಸುತ್ತಿರುವಿರಾ? ಶಿಕ್ಷಕರು ತರಬೇತಿ
ಪಡೆದಿರುವರೇ? ಅವರು ಏನು ತರಬೇತಿ ಪಡೆದಿರಬೇಕು? -
ಎಂಬ ಪ್ರಶ್ನೆಗಳನ್ನು ನನಗೆ ಯಾರೂ ಕೇಳುವುದಿಲ್ಲ. ಹೀಗಾಗಿ,
ಇದು ಯಾರು ಏನುಬೇಕಾದರೂ ಮಾಡಿಕೊಳ್ಳ ಬಹುದಾದ
ಮುಕ್ತ ವಲಯವಾಗಿದೆ. ಆದ್ದರಿಂದ ಇಂದು ಪುಟಾಣಿ ಮಕ್ಕಳ
ನಿಗಾವಣೆ ಮತ್ತು ಶಿಕ್ಷಣಕ್ಕಾಗಿ ಅನೇಕ ಖಾಸಗೀ ಕೇಂದ್ರಗಳು
ನಾಯಿಕೊಡೆಯಂತೆ ಬೆಳೆಯುತ್ತಿವೆ. ವಿಶೇಷವಾಗಿ ನಗರ
ಪ್ರದೇಶಗಳಲ್ಲಿ ಡೇ-ಕೇರ್ ಸೆಂಟರ್, ಕ್ರೆμï, ಶಿಶುವಿಹಾರಗಳು
ವಿಪರೀತವಾಗಿ ಹುಟ್ಟಿಕೊಳ್ಳುತ್ತಿವೆ. ಇವುಗಳನ್ನು ಪ್ರಾರಂಭಿಸಲು
ಮತ್ತು ನಡೆಸಿಕೊಂಡು ಹೋಗಲು ಯಾವುದೇ ನಿಯಮಗಳಿಲ್ಲ.
ಇದೇ ಈ ವಿಷಯದಲ್ಲಿ ಅತಿ ದೊಡ್ಡ ಆತಂಕದ ಅಂಶ.
ಏಕೆಂದರೆ, ಮಕ್ಕಳ ಸುರಕ್ಷೆ, ಅವರ ಕಲಿಕೆ, ಬೆಳವಣಿಗೆ
ಮತ್ತು ಅಭಿವೃದ್ಧಿಯ ಮೇಲೆ ಇದು ತೀವ್ರವಾದ ಪರಿಣಾಮ
ಬೀರುತ್ತದೆ. ಮಗುವಿನ ಬೆಳವಣಿಗೆಯ ಮಹತ್ವದ ಘಟ್ಟಗಳಲ್ಲಿ
ಎಳೆಯ ವಯಸ್ಸು ಒಂದು ಅತ್ಯಂತ ಮಹತ್ವದ ಘಟ್ಟ.
Actions (login required)
 |
View Item |